Skip to main content

Posts

Showing posts from March, 2020

ಬ್ರಹ್ಮಸೂತ್ರಭಾಷ್ಯಸಮುಚ್ಚಯಃ ೨

ಬ್ರಹ್ಮಸೂತ್ರಭಾಷ್ಯಸಮುಚ್ಚಯಃ ೨ (ರಾಮಕೃಷ್ಣಾಶ್ರಮದ ಸ್ವಾಮೀ ಆದಿದೇವಾನಂದರ "ಬ್ರಹ್ಮಸೂತ್ರಗಳು" ಕೃತಿಯ ಪೀಠಿಕೆಯಿಂದ ಉದ್ಧೃತ) 1.  ಶಾಂಕರ-ಅದ್ವೈತಮತೀಯ ಭಾಷ್ಯಗಳ ಆದ್ಯಪ್ರವರ್ತಕರು— ಶ್ರೀಶಂಕರಾಚಾರ್ಯರು    ಈಗ ನಮಗೆ ಸಿಕ್ಕಿರುವ ಭಾಷ್ಯಗಳಲ್ಲಿ ಶ್ರೀಶಂಕರಾಚಾರ್ಯರದು ಅತ್ಯಂತಪ್ರಾಚೀನವಾಗಿದೆ. ಅವರು ಉಪನಿಷತ್ತುಗಳಿಗೂ ಬ್ರಹ್ಮಸೂತ್ರಗಳಿಗೂ ಅದ್ವೈತಪರವಾಗಿ ಭಾಷ್ಯವನ್ನು ಬರೆದಿರುತ್ತಾರೆ. "ಬ್ರಹ್ಮಸತ್ಯಂ ಜಗನ್ಮಿಥ್ಯಾ ಜೀವೋ ಬ್ರಹ್ಮೈವ ನಾಪರಃ" ಎಂಬುದು ಇವರ ಸಿದ್ಧಾಂತದ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಸುತ್ತದೆ— "ಬ್ರಹ್ಮವೊಂದೇ ಸತ್ಯ; ಜಗತ್ತು ಮಿಥ್ಯೆ, ಜೀವ ಬ್ರಹ್ಮಕ್ಕಿಂತ ಬೇರೆಯಲ್ಲ". ಚೈತನ್ಯವು ಪರಬ್ರಹ್ಮ, ಅಪರಬ್ರಹ್ಮ ಎಂದು ಎರಡು ವಿಧ.     ಎಲ್ಲಿ ಅವಿದ್ಯಾಕೃತವಾದ ನಾಮ-ರೂಪಾದಿ (ವಿಶೇಷ)ಗಳನ್ನು ನಿಷೇಧಿಸಿ ಅಸ್ಥೂಲಾದಿ (ಪ್ರಣವ / ಓಮ್, ತತ್, ಸತ್ ಮುಂತಾದ ಸ್ಥೂಲವಲ್ಲದ  ಸೂಕ್ಷ್ಮ)-ಶಬ್ದಗಳಿಂದ ಬ್ರಹ್ಮನನ್ನು ಉಪದೇಶಿಸಿದೆಯೋ ಅದು ನಿರುಪಾಧಿಕವೂ ನಿರ್ವಿಶೇಷವೂ ಆದ ಪರಬ್ರಹ್ಮ; ಎಲ್ಲಿ ಅದೇ ಬ್ರಹ್ಮವನ್ನು ನಾಮರೂಪಾದಿ-ವಿಶೇಷದಿಂದ ವಿಶಿಷ್ಟವಾಗಿ ಉಪದೇಶಿಸಿದೆಯೋ ಅದು (ಸೋಪಾಧಿಕವೂ ಸವಿಶೇಷವೂ ಆದ) ಅಪರಬ್ರಹ್ಮ.  "ಯತ್ರಾವಿದ್ಯಾಕೃತನಾಮರೂಪಾದಿವಿಶೇಷಪ್ರತಿಷೇಧಾದಸ್ಥೂಲಾದಿಶಬ್ದೈರ್ಬ್ರಹ್ಮೋಪದಿಶ್ಯತೇ ತತ್ಪರಮ್ | ತದೇವ ಯತ್ರ ನಾಮರೂಪಾದಿವಿಶೇಷೇ...